No.252,18th cross, Sadashiva Nagar, Bangalore – 560080 India.

Chief Minister Of Karnataka Shri Siddaramaiah And Energy Minister DK Shivakumar Launched The Distribution Of LED Bulbs Under The “HOSA BELAKU” Scheme.

Chief Minister Of Karnataka Shri Siddaramaiah And Energy Minister DK Shivakumar Launched The Distribution Of LED Bulbs Under The “HOSA BELAKU” Scheme.

Hosa Belaku 750 250

 

Chief Minister of Karnataka Shri Siddaramaiah and Energy Minister DK Shivakumar launched the distribution of LED bulbs under the “HOSA BELAKU” scheme. Power star Puneeth and ex-MP Ramya will be the brand ambassadors to popularize this scheme.

ಹೊಸಬೆಳಕು ಯೋಜನೆಯು ಎಲ್ಲ ಗೃಹ ಬಳಕೆದಾರರಿಗೆ ಹಾಲಿ ಇರುವ ಬುರುಡೆ ಬಲ್ಬ್ / ಸಿ. ಎಫ್. ಎಲ್. ಗಳ ಬದಲಿಗೆ, ಎಲ್. ಇ. ಡಿ ಬಲ್ಬ್ ಅನ್ನು ನಿರ್ಧಿಷ್ಟ ಕಡಿಮೆ ದರದಲ್ಲಿ ಒದಗಿಸುವುದಾಗಿರುತ್ತದೆ.

ಈ ಯೋಜನೆಯಲ್ಲಿ 9 ವ್ಯಾಟ್ ಎಲ್. ಇ. ಡಿ. ಬಲ್ಬ್ ಗಳನ್ನು ವಿತರಿಸಲಾಗುತ್ತಿದ್ದು, ಇದು 60 ವ್ಯಾಟ್ಬುರುಡೆ ಬಲ್ಬ್ /14 ವ್ಯಾಟ್ ಸಿ.ಎಫ್.ಎಲ್.ನ ಪ್ರಕಾಶಮಾನಕ್ಕೆ ಸಮಾನವಾಗಿರುತ್ತದೆ.
ಇಚ್ಛಿಸುವ ಗೃಹ ವಿದ್ಯುತ್ ಬಳಕೆದಾರರು 5 ಬಲ್ಬ್ ( 2 ಕಿ. ವ್ಯಾ ಮಂಜೂರಾತಿ ಭಾರಕ್ಕಿಂತ ಕಡಿಮೆ ) ಅಥವಾ 10 ( 2 ಕಿ. ವ್ಯಾ ಮಂಜೂರಾತಿ ಭಾರಕ್ಕಿಂತ ಅಧಿಕ ) ಬಲ್ಬ್ ಗಳನ್ನು ಖರೀದಿಸಬಹುದು.

ಪ್ರತಿ ಎಲ್. ಇ. ಡಿ ಬಲ್ಬ್ ನ ಬಳಕೆಯಿಂದ ಗ್ರಾಹಕರು ವಾರ್ಷಿಕ ಅಂದಾಜು ರೂ. 68/- ಗಳನ್ನು ಉಳಿಸಬಹುದಾಗಿರುತ್ತದೆ.

ಚಾ.ವಿ.ಸ.ನಿ.ನಿ. ಯು ಈ ಯೋಜನೆಯನ್ನು ಮೇ EESL ಸಂಸ್ಥೆಯ ಸಹಯೋಗದೊಂದಿಗೆ ಅನುಷ್ಟನಗೊಳಿಸಲು ಉದ್ದೇಶಿಸಿದೆ.

1 ಪ್ರತಿ ಎಲ್.ಇ. ಡಿ. ಬಲ್ಬ್ನ ಬೆಲೆಯಾದ ರೂ. 100/- ಗಳನ್ನು ಸಂಪೂರ್ಣವಾಗಿ ಪಾವತಿಸಿ ಬಲ್ಬ್ ಗಳನ್ನು ಖರೀದಿಸುವುದು.

2 ಆಯ್ಕೆ ಇದರಲ್ಲಿ ಗ್ರಾಹಕರು ಪ್ರತಿ ಎಲ್ ಇ ಡಿ ಬಲ್ಬ್ ಗೆ ರೂ. 10/- ಗಳನ್ನು ಪಾವತಿಸುವುದು, ಹಾಗೂ ಬಾಕಿ ರೂ. 95 ಗಳನ್ನು 10 ಮಾಸಿಕ ಕಂತುಗಳಲ್ಲಿ ವಿದ್ಯುತ್ ಬಿಲ್ಲಿನ ಜೊತೆ ಪಾವತಿಸುವುದು.

ಕರ್ನಾಟಕ ರಾಜ್ಯದಲ್ಲಿ ಅಂದಾಜು 1.53 ಕೋಟಿ ಗೃಹ ಬಳಕೆದಾರರಿದ್ದಾರೆ,
ಗೃಹ ಬಳಕೆದಾರರ ಶೇ 75 ರಷ್ಟು ಗ್ರಾಹಕರು ಈ ಯೋಜನೆಯಲ್ಲಿ ಭಾಗವಹಿಸಿದ್ದಲ್ಲಿ ಇವರ ಒಟ್ಟುಸಂಖ್ಯೆ ಅಂದಾಜು 1.15 ಕೋಟಿಗಳಾಗುತ್ತದೆ.
ಈ ಯೋಜನೆಯಲ್ಲಿ ಅಂದಾಜು 6 ಕೋಟಿ ಎಲ್.ಇ.ಡಿ. ಬಲ್ಬ್ ಗಳನ್ನು ಮಾರಾಟ ಮಾಡುವ ಉದ್ದೇಶವಿರುತ್ತದೆ.

ಈ ಯೋಜನೆಯ ಸಂಪೂರ್ಣ ಅನುಷ್ಟಾನದಿಂದ ರಾಜ್ಯದ ವಿದ್ಯುತ್ ಬಳಕೆಯಲ್ಲಿ ವಾರ್ಷಿಕ ಅಂದಾಜು 1287 ಎಂ. ಯೂ ಗಳ ಉಳಿತಾಯವಾಗಲಿದ್ದು, ಅಂದಾಜು ರೂ. 450 ಕೋಟಿಗಳ ಉಳಿತಾಯವಾಗುತ್ತದೆ.

ಈ ಯೋಜನೆಯ ಸಂಪೂರ್ಣ ಅನುಷ್ಠಾನದಿಂದ ರಾಜ್ಯದ ವಿದ್ಯುತ್ ಗರಿಷ್ಟ ಬೇಡಿಕೆಯು ಅಂದಾಜು 1226 ಎಂ. ಡಬ್ಲ್ಯೂ ಕಡಿಮೆಯಾಗುವುದು.
ಈ ಯೋಜನೆಯನ್ನು ನಂತರ ದಿನಗಳಲ್ಲಿ ವಾಣಿಜ್ಯ ಬಳಕೆದಾರರು ಮತ್ತು ಬೀದಿ ದೀಪಗಳಿಗೆ ವಿಸ್ತರಿಸಬಹುದಾಗಿರುತ್ತದೆ.

1 ವಾಣಿಜ್ಯ ಬಳಕೆದಾರರಿಂದ ವಾರ್ಷಿಕ ಅಂದಾಜು 697 ಎಂ. ಯೂ ಗಳ ಉಳಿತಾಯವಾಗಲಿದ್ದು ಅಂದಾಜು ರೂ. 243 ಕೋಟಿಗಳ ಉಳಿತಾಯವಾಗುತ್ತದೆ.

2 ಬೀದಿ ದೀಪಗಳ ಬದಲಾವಣೆಯಿಂದ ವಾರ್ಷಿಕ ಅಂದಾಜು 437 ಎಂ. ಯೂ ಗಳ ಉಳಿತಾಯವಾಗಲಿದ್ದು, ಅಂದಾಜು ರೂ. 153 ಕೋಟಿಗಳ ಉಳಿತಾಯವಾಗುತ್ತದೆ.

Our LED programme ‘HOSA BELAKU’ will be the India’s best said the Energy Minister DK Shivakumar. Karnataka Government’s focus is to reach every home with this Hosa Belaku scheme. Hosa Belaku scheme will provide LED bulbs at the rate of Rs. 100 per bulb, 10 bulbs per house. People can pay in 10 monthly installments. Line Men & Meter Readers will come to each house & deliver bulbs. Bulbs will have 3 yr warranty. This scheme will save 400 MW of electricity.

CM Siddaramaiah added that “By using one bulb, a consumer can save Rs. 120-130 per year via cuts in electricity bill. Hosa Belaku is a very important scheme for our state. It helps both consumers and the government”